ಮಂಗಳವಾರ, ಸೆಪ್ಟೆಂಬರ್ 9, 2014
ಎಂಥ ಗುರುವಿನ ಪಡೆದೆನವ್ವ
ಎಂಥ ಗುರುವಿನ ಪಡೆದೆನವ್ವ
ಶಾಂತ ರೂಪಿ ವಿರಕ್ತನವ್ವ ।
ತಾಳಿಕೋಟಿಯ ಭಾಗ್ಯದ ನಿಧಿಯು
ಖಾಸಗತೇಶನ ಕಾರುಣ್ಯ ಶಿಶುವು ।।
ಅಂತರಂಗದ ಕಣ್ಣು ತೆರೆಸಿದ ಸಿದ್ಧನು
ಅಂತಃ ಕರುಣದಿ ಜಗವ ಗೆದ್ದವನು ॥
ಶರಣರ ನುಡಿಗಳ ಅರಿತು ನಡೆದವನು
ಭಕ್ತರ ಮನದಲಿ ಬೆರೆತು ಹೋದವನು ॥
ಮಾತಿನ ಮಾತಿಗೆ ನಿಲುಕದಂತವನು
ಗೀತೆಯ ಪದಗಳ ಮೀರಿ ನಿಂತವನು ॥
ಆಡಂಬರವನು ಅರಿಯದಿದ್ದವನು
ಅಕಳಂಕ ಕಾರಿತಡಿ ಮಿಂದು ಎದ್ದವನು ॥
ಕಾಲವನೆ ಗೆದ್ದ ಮುಗ್ಧ ಮೂರುತಿಯು
ಲೀಲೆಯ ತೋರುತ ಹರಡಿ ಕೀರಿತಿಯು ॥
ಪಡೆದು ಅಕ್ಷರ ರೂಪ ಚಂದವಾದವನು
ಕಡದಳ್ಳಿ ಚಂದ್ರಗೌಡಗೆ ವರವ ಕೊಟ್ಟವನು ||
ಶಾಂತ ರೂಪಿ ವಿರಕ್ತನವ್ವ ।
ತಾಳಿಕೋಟಿಯ ಭಾಗ್ಯದ ನಿಧಿಯು
ಖಾಸಗತೇಶನ ಕಾರುಣ್ಯ ಶಿಶುವು ।।
ಅಂತರಂಗದ ಕಣ್ಣು ತೆರೆಸಿದ ಸಿದ್ಧನು
ಅಂತಃ ಕರುಣದಿ ಜಗವ ಗೆದ್ದವನು ॥
ಶರಣರ ನುಡಿಗಳ ಅರಿತು ನಡೆದವನು
ಭಕ್ತರ ಮನದಲಿ ಬೆರೆತು ಹೋದವನು ॥
ಮಾತಿನ ಮಾತಿಗೆ ನಿಲುಕದಂತವನು
ಗೀತೆಯ ಪದಗಳ ಮೀರಿ ನಿಂತವನು ॥
ಆಡಂಬರವನು ಅರಿಯದಿದ್ದವನು
ಅಕಳಂಕ ಕಾರಿತಡಿ ಮಿಂದು ಎದ್ದವನು ॥
ಕಾಲವನೆ ಗೆದ್ದ ಮುಗ್ಧ ಮೂರುತಿಯು
ಲೀಲೆಯ ತೋರುತ ಹರಡಿ ಕೀರಿತಿಯು ॥
ಪಡೆದು ಅಕ್ಷರ ರೂಪ ಚಂದವಾದವನು
ಕಡದಳ್ಳಿ ಚಂದ್ರಗೌಡಗೆ ವರವ ಕೊಟ್ಟವನು ||
ವಿರಕ್ತ ಶ್ರೀಗಳು
ಮುಗ್ಧ ಭಕ್ತರ ಮನೆಮನೆಯಲ್ಲಿ ಮನಮನದಲ್ಲಿ ನೆಲೆನಿಂತ ಲಿಂ. ವಿರಕ್ತ ಶ್ರೀಗಳು ಮಾತಿಗೆ ನಿಲುಕದವರು ! ಅಕ್ಷ ರಗಳ ಬಂಧನದಲ್ಲಿ ಸಿಲುಕದವರು ! ಮಾತಿನಿಂದತ್ತತ್ತ ಬೆಳಗುಗುವ ಜ್ಯೋತಿಯಾದವರು !
ಪೂಜ್ಯರ ಪೂರ್ವಾಶ್ರಮದ ತಂದೆ ತಾಯಿಗಳು ಶಿವಬಸವದೇವರು ಮತ್ತು ಅನ್ನಪೂರ್ಣಾದೇವಿಯವರು.ಜೂನ್ 1,1954 ರಂದು ಉದಯಿಸಿದ ವಿರಕ್ತಪ್ಪ ಓದಿದ್ದು ಬಹಳ ಕಡಿಮೆ. ತಾಳಿಕೋಟಿಯ ಕನ್ನಡ ಶಾಲೆ ಮತ್ತು ಶ್ರೀ ಖಾಸ್ಗತೇಶ್ವರ ಪ್ರೌಢ ಶಾಲೆಯಲ್ಲಿ ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣ ಪಡೆದರು. ಶಿವಯೋಗಮಂದಿರದಲ್ಲಿ ಅನುಭಾವದ ಅನುಸಂಧಾನ ಮಾಡಿಕೊಂಡವರು ! ನಿಜ ಅರ್ಥದಲ್ಲಿ ಸಾಧನೆ ಮಾಡಿದ್ದು ಭಕ್ತರ ಮಧ್ಯದಲ್ಲಿ. ಸಾಮಾನ್ಯ ಜನರೊಂದಿಗೆ ಸಮರಸವಾಗಿ ಬೆರೆತು ದೊಡ್ಡವರಾದವರು. ಶಿವಶರಣರ ಬದುಕಿಗೆ ಮಾದರಿಯಾವದರು.
ತಮ್ಮ ದೃಷ್ಟಿ ತೊಂದರೆಯನ್ನು ಸವಾಲಾಗಿ ಸ್ವೀಕರಿಸಿ ವರವನ್ನಾಗಿ ಪರಿವರ್ತಿಸಿಕೊಂಡವರು. ಭಕ್ತರ ಮೈದಡವಿ, ಬೆನ್ನು ಚಪ್ಪರಿಸಿ ಭರವಸೆ ತುಂಬಿದವರು! ತಾವು ಮಕ್ಕಳಂತೆ ಮುಗ್ಧರಾಗಿದ್ದವರು. ತಮ್ಮ ಸಮೆಎಪ ಬಂದವರನ್ನೂ ಮಕ್ಕಳಾಗಿಸುವ ಚುಂಬಕ ಶಕ್ತಿ ಯುಳ್ಳವರು !
ಪೂಜ್ಯರಿಗೆ ೫೦ ತುಂಬಿದಾಗ ಸುವರ್ಣ ಸಂಭ್ರಮವನ್ನು ಆಚರಿಸಲಾಯಿತು . ಆಗ ಅನೇಕ ಧಾರ್ಮಿಕ ಕಾರ್ಯಕ್ರಮಗಳು ಅರುಗಿದವು. j
ಬಡವ ಬಲ್ಲಿದ, ಸುಶಿಕ್ಷಿತ ನಿರಕ್ಷರಿ,ಮೇಲು ಕೀಳು ಎಂಬ ತರತಮ ಭಾವವನ್ನೇ ಕಿತ್ಥು ಹಾಕುವಷ್ಟು ಹರಿತವಾಗಿತ್ತು ಅವರ ಅಂತರಂಗದ ಸದ್ಭಾವ ದೃಷ್ಟಿ ! ಭಕ್ತರೆಲ್ಲರನ್ನು ದೈವ ಶ್ರದ್ಧೆಯ ಸಮರಸದದ್ಲ್ಲಿ ತೇಲಾಡಿಸಿಬಿಡುವ ಅದಮ್ಯ ಚೈತನ್ಯವಿತ್ತು ಅವರ ಸಾಮಿಪ್ಯದಲ್ಲಿ! ಅಂತೇಯೇ ಲಕ್ಷ ಲಕ್ಷ ಜನ ಅಂತಿಮ ಯಾತ್ರೆಯಲ್ಲಿ ಮಿಂದು ಪವಿತ್ರರಾದರು. ಚಿಕ್ಕ ಮಕ್ಕಳಂತೆ ಬಿಕ್ಕಿ ಬಿಕ್ಕಿ ಅತ್ತರು ! ಮೈಮರೆತು ಸೇವೆಯನ್ನೂ ಸಲ್ಲಿಸಿದರು !
ಇತಿಹಾಸದಲ್ಲಿ ಎಂದೂ ಕೇಳಿರದ , ಭವಿಷ್ಯದಲ್ಲಿ ಎಂದೂ ಕಾಣದಂತಹ ಸನ್ನಿವೇಶ 20 08 2014 ರಂದು ನಿರ್ಮಾಣವಾಗಿತ್ತು. ಅಂತಹ ದೃಶ್ಹ್ಯವನ್ನು ಕಂಡು ಕಣ್ಣುಗಳು ಪವಿತ್ರವಾದವು! ಕೀರ್ತಿ ಕೇಳಿದ ಕಿವಿಗಳು ಧನ್ಯವಾದವು ! ಮನಸ್ಸು ಭಾವಗಳು ಪುಲಕಿತಗೊಂಡವು !
ಕುಂತನಿಂತ ಜನರೆಲ್
ಕುಂತನಿಂತ ಜನರೆಲ್ಲ ಶಾಂತರಾಗಿ ಕೇಳಿರಿ
ತಾಳಿಕೋಟಿ ವಿರಕ್ತನ ಕತೆಯನ್ನ |
ಖಾಸಗತ ಮಠಕೆ ಕೀರ್ತಿಯ ತಂದ
ನಿಜದ ಗುರುವಿನ ಚರಿತೆಯನ |
ಅನ್ನಪೂರ್ಣಾದೇವಿ ಶಿವಬಸವ ದೇವರ
ಪುಣ್ಯ ಉದರದಿ ಜನಿಸಿದನ |
ಹಾಲ ಮನಸಿನ ಲೋಲ ಶ್ರೀ ಗುರು
ಲೋಕದಿ ಆಡಿದ ಆಟವನ |
ಮುಗ್ಧ ಭಾವದ ತೇಜೋ ಮೂರ್ತಿಯು
ಹಳ್ಳಿ ಹಳ್ಳಿಗೆ ಅಲೆದವನ |
ಶರಣರ ನಡೆನುಡಿ ಅರಿತು ನಡೆಯಲು
ಶುಭಸಂದೇಶವ ಸಾರಿದನ |
ಹೊರಗಣ್ಣು ಮುಚ್ಚಿ ಒಳಗಣ್ಣು ತೆರೆದು
ಭಕುತರ ಮನವನು ಗೆದ್ದವನ |
ಶುದ್ಧಮನಸಿಂದ ಶುಭ ಹಾರೈಸಿ
ಬೆನ್ನಿನೆ ಮ್ಯಾಲೆ ಗುದ್ದಿದವನ |
ಜಾತಿಮತಗಳ ಭೇದವ ಮಾಡದೆ
ನಮ್ಮವನಮ್ಮವರೆಂದವನ |
ಮನಸಿನ ಮೈಲಿಗೆ ತೊಳೆಯುವ ಕಾಯಕ
ಬಿಟ್ಟು ಬಿಡದಲೆ ನಡಿಸಿದನ |
ಜಪತಪ ಮಾಡದೆ ನೆಪವನು ತೋರದೆ
ಸಾತ್ವಿಕ ಬದುಕಲಿ ನಲಿದವನ |
ಮಾತಿನ ಮೋಡಿಗೆ ಸಿಲುಕದ ವಿರಕ್ತನು
ಲಿಂಗದೇವನ ಒಲಿಸಿದನ |
ಯಾವುದೋ ಜನ್ಮದ ಪುಣ್ಯಕೊ ಏನೊ
ನಮ್ಮ ಭಾಗ್ಯಕೆ ದೊರಕಿದನ |
ಅರಿವಿನ ಮುಗ್ಧನು ಕಾಲವ ಗೆದ್ದು
ಬಯಲಿನ ಬಯಲಲಿ ಬೆರೆತವನ|
ಕಡದಳಿ ಚಂದ್ರಗೌಡ ಅಕ್ಷರ ಜೋಡಿಸಿ
ಚಂದದ ಹಾಡ ಕಟ್ಟ್ಯಾನ |
ಮಾತಿನ ಹೊಲಬಿಗೆ ಬರಹದ ತಲಬಿಗೆ
ಸಿಗಲಾರದಂಥ ವಿರಕ್ತನ |
ಬಯಲಾದ
ಬಯಲಾದ ಗುರು ಬಯಲಾದ
ಬಯಲಾದ ಗುರು
ಬಯಲಾದ |
ಖಾಸ್ಗತಮಠ ಕಾರುಣ್ಯ ನಿಧಿಯು
ಬಯಲಾದ ಗುರು ಬಯಲಾದ |
ಹಾಲ ಮನಸಿನ ಹಸುಳೆ
ಲೋಲ ವಿರಕ್ತನು ಇಂದು
ಕಾಲವನೆ ಗೆದ್ದು - ಮೇಲಾದ ಪದವಿಯಲಿ | ಬಯಲಾದ |
ಸದ್ದುಗದ್ದಲವಿಲ್ಲದೆ
ಎದ್ದುತಾಹೊರಟೋದ
ಮುದ್ದು ಭಕುತರಿಗೆಲ್ಲ - ಖುದ್ದು ದಾರಿಯ ತೋರಿ | ಬಯಲಾದ |
ಶರಣರ ನುಡಿಗಳನು
ಸ್ಮರಣಿಯ ಮಾಡುತ್ತ
ಹರರೂಪಿ ತಾನಾಗಿ - ಸರಿದಾರಿ ತೋರುತ್ತ | ಬಯಲಾದ I
ಖಾಸಗತನ ಅನುಸರಿಸಿ
ಲೇಸಾಗಿ ಬದುಕುತ್ತ
ಈಶನ ಕರುಣಿಯಲಿ- ಈಸಾಡಿ ನಲಿಯುತ್ತ | ಬಯಲಾದ I
ಜೋಕಿಲಿ ಬದುಕನ್ನು
ಪಾಕಗೊಳಿಸಿದ ಶರಣ
ನಾಕಕ್ಕೆ ಮಿಗಿಲಾದ- ಲೋಕವನೆ ರಚಿಸುತ್ತ | ಬಯಲಾದ I
ಹೊರಗಣ್ಣು ಮುಚ್ಚಿಟ್ಟು
ತೆರೆದಿಟ್ಟು ಒಳಗಣ್ಣು
ಶರಣರ ಅನುಭಾವದಿ - ಬೆರೆತಂಥ ವಿರಕ್ತನು | ಬಯಲಾದ I
ಕಡದಳ್ಳಿ ಚಂದ್ರಗೌಡ
ಹಿಡಿದು ಪದಗಳನಿಲ್ಲಿ
ಮಿಡಿದ ಕಂಬನಿಗಳು - ಪಡೆದು ಹಾಡಿನ ರೂಪ I ಬಯಲಾದ
ಬಯಲಾದ ಗುರು
ಬಯಲಾದ |
ಖಾಸ್ಗತಮಠ ಕಾರುಣ್ಯ ನಿಧಿಯು
ಬಯಲಾದ ಗುರು ಬಯಲಾದ |
ಹಾಲ ಮನಸಿನ ಹಸುಳೆ
ಲೋಲ ವಿರಕ್ತನು ಇಂದು
ಕಾಲವನೆ ಗೆದ್ದು - ಮೇಲಾದ ಪದವಿಯಲಿ | ಬಯಲಾದ |
ಸದ್ದುಗದ್ದಲವಿಲ್ಲದೆ
ಎದ್ದುತಾಹೊರಟೋದ
ಮುದ್ದು ಭಕುತರಿಗೆಲ್ಲ - ಖುದ್ದು ದಾರಿಯ ತೋರಿ | ಬಯಲಾದ |
ಶರಣರ ನುಡಿಗಳನು
ಸ್ಮರಣಿಯ ಮಾಡುತ್ತ
ಹರರೂಪಿ ತಾನಾಗಿ - ಸರಿದಾರಿ ತೋರುತ್ತ | ಬಯಲಾದ I
ಖಾಸಗತನ ಅನುಸರಿಸಿ
ಲೇಸಾಗಿ ಬದುಕುತ್ತ
ಈಶನ ಕರುಣಿಯಲಿ- ಈಸಾಡಿ ನಲಿಯುತ್ತ | ಬಯಲಾದ I
ಜೋಕಿಲಿ ಬದುಕನ್ನು
ಪಾಕಗೊಳಿಸಿದ ಶರಣ
ನಾಕಕ್ಕೆ ಮಿಗಿಲಾದ- ಲೋಕವನೆ ರಚಿಸುತ್ತ | ಬಯಲಾದ I
ಹೊರಗಣ್ಣು ಮುಚ್ಚಿಟ್ಟು
ತೆರೆದಿಟ್ಟು ಒಳಗಣ್ಣು
ಶರಣರ ಅನುಭಾವದಿ - ಬೆರೆತಂಥ ವಿರಕ್ತನು | ಬಯಲಾದ I
ಕಡದಳ್ಳಿ ಚಂದ್ರಗೌಡ
ಹಿಡಿದು ಪದಗಳನಿಲ್ಲಿ
ಮಿಡಿದ ಕಂಬನಿಗಳು - ಪಡೆದು ಹಾಡಿನ ರೂಪ I ಬಯಲಾದ
ಹಸುಳೆಯ ತೇಜ
ಭಕುತರ ಕಣ್ಮಣಿಯೆ ಭಕುತರ ದಿನಮಣಿಯೆ
ಭಕುತರ ರತುನ ತವನಿಧಿ | ವಿರಕ್ತನೆ
ಭಕುತರ ಮೇರು ಪರ್ವತವೆ |
ಹಸನಾದ ಮೊಗದಲ್ಲಿ ಹೊಸಕಳೆ ಹೊಳಿತೈತಿ
ನಸುನಗೆ ತೆರಿಯ ಹೊಡಿತೈತಿ | ವಿರಕ್ತನ
ಹಸುಳೆಯ ತೇಜ ಮೆರಿತೈತಿ |
ಕೂಸುಹೂಮನಸಿಗೆ ಗಾಸಿಬೀಸಿ ಮಾಡದಲೆ
ಸೂಸು ಗಾಳ್ಯಾಗಿ ಒಳಹೊಕ್ಕು | ವಿರಕ್ತನ
ಭಾಷೆಯ ಬೆಡಗನ್ನರಿಬೇಕೊ |
ಹೊರಗಣ್ಣ ಮುಚ್ಚಿದ್ದು ತೆರೆದಿಟ್ಟು ಒಳಗಣ್ಣು
ಅರಿವಿನ ಗುರುವ ಧೇನಿಸುತ | ವಿರಕ್ತನು
ಪರಮಾರ್ಥದಲ್ಲಿ ನಿಲ್ಲುವನು |
ಪರತತ್ವದ ಗೊಡವಿಲ್ಲ ಪರಿಣತಿ ಪಡೆದಿಲ್ಲ
ತರತರ ಮಾತು ಗೊತ್ತಿಲ್ಲ | ವಿರಕ್ತನಿಗೆ
ಶರಣರ ಬಿಟ್ಟು ಬದುಕಿಲ್ಲ |
ಶರಣರ ನುಡಿಗಳನು ಸ್ಮರಣಿಯ ಮಾಡುತ್ತ
ಕರಣಗಳ ಕಟ್ಟಿ ನಿಲಿಸುತ್ತ | ವಿರಕ್ತನು
ಅರಿವಿನ ಆಳದಿ ಮುಳುಗುವನು |
ಎಲ್ಲರನ ಬಳಿಕರೆದು ಮೆಲ್ಲನೆ ನುಡಿವನು
ಮಲ್ಲಿಗೆ ಪರಿಮಳ ಬೀರುತ | ವಿರಕ್ತನು
ಕಲ್ಲೆದೆ ಕರಗಿಸಿ ಬಿಡುವನು |
ಕರುಳಿನ ಮಾತಿಗೆ ಶರಣೆನದ ಜನರಿಲ್ಲ
ಹರಭಾವ ಸೂಸಿ ಹರಿತೈತಿ | ವಿರಕ್ತನಲಿ
ಸುರಧೇನು ವಾಸ ಹೂಡೈತಿ |
ಮುದ್ದಾಡಿ ಭಕುತರನು. ಗುದ್ದುಗಳ ನೀಡುವನು
ಸದ್ದಿಲ್ಲದೇ ಮನಸ ಗೆಲ್ಲುವನು ! ವಿರಕ್ತನು
ಬುದ್ಧಿಗೆ ಮೀರಿ ನಿಲ್ಲುವನು !
ಗುರುವೆಂದ್ರೆ ಗುರುವಲ್ಲ ಹರನೆಂದ್ರೆ ಹರನಲ್ಲ
ಮರವಾಗಿ ನೆರಳು ನೀಡುವ ! ವಿರಕ್ತನಿಗೆ
ಸರಿಸಾಟಿ ಯಾರೋ ಜಗದಾಗ !
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)