ಮಂಗಳವಾರ, ಸೆಪ್ಟೆಂಬರ್ 9, 2014

ವಿರಕ್ತ ಶ್ರೀಗಳು

ಮುಗ್ಧ ಭಕ್ತರ ಮನೆಮನೆಯಲ್ಲಿ ಮನಮನದಲ್ಲಿ ನೆಲೆನಿಂತ ಲಿಂ. ವಿರಕ್ತ ಶ್ರೀಗಳು ಮಾತಿಗೆ ನಿಲುಕದವರು ! ಅಕ್ಷ  ರಗಳ ಬಂಧನದಲ್ಲಿ ಸಿಲುಕದವರು ! ಮಾತಿನಿಂದತ್ತತ್ತ ಬೆಳಗುಗುವ ಜ್ಯೋತಿಯಾದವರು !
ಪೂಜ್ಯರ ಪೂರ್ವಾಶ್ರಮದ ತಂದೆ ತಾಯಿಗಳು ಶಿವಬಸವದೇವರು ಮತ್ತು ಅನ್ನಪೂರ್ಣಾದೇವಿಯವರು.ಜೂನ್ 1,1954 ರಂದು ಉದಯಿಸಿದ ವಿರಕ್ತಪ್ಪ ಓದಿದ್ದು ಬಹಳ ಕಡಿಮೆ. ತಾಳಿಕೋಟಿಯ ಕನ್ನಡ ಶಾಲೆ ಮತ್ತು ಶ್ರೀ ಖಾಸ್ಗತೇಶ್ವರ ಪ್ರೌಢ ಶಾಲೆಯಲ್ಲಿ ಪ್ರಾಥಮಿಕ ಮತ್ತು  ಮಾಧ್ಯಮಿಕ ಶಿಕ್ಷಣ  ಪಡೆದರು. ಶಿವಯೋಗಮಂದಿರದಲ್ಲಿ ಅನುಭಾವದ ಅನುಸಂಧಾನ ಮಾಡಿಕೊಂಡವರು ! ನಿಜ ಅರ್ಥದಲ್ಲಿ ಸಾಧನೆ ಮಾಡಿದ್ದು ಭಕ್ತರ ಮಧ್ಯದಲ್ಲಿ. ಸಾಮಾನ್ಯ ಜನರೊಂದಿಗೆ ಸಮರಸವಾಗಿ ಬೆರೆತು ದೊಡ್ಡವರಾದವರು. ಶಿವಶರಣರ ಬದುಕಿಗೆ ಮಾದರಿಯಾವದರು.
ತಮ್ಮ ದೃಷ್ಟಿ ತೊಂದರೆಯನ್ನು ಸವಾಲಾಗಿ ಸ್ವೀಕರಿಸಿ ವರವನ್ನಾಗಿ ಪರಿವರ್ತಿಸಿಕೊಂಡವರು. ಭಕ್ತರ ಮೈದಡವಿ, ಬೆನ್ನು ಚಪ್ಪರಿಸಿ ಭರವಸೆ  ತುಂಬಿದವರು! ತಾವು ಮಕ್ಕಳಂತೆ ಮುಗ್ಧರಾಗಿದ್ದವರು. ತಮ್ಮ ಸಮೆಎಪ ಬಂದವರನ್ನೂ ಮಕ್ಕಳಾಗಿಸುವ ಚುಂಬಕ ಶಕ್ತಿ ಯುಳ್ಳವರು !
ಪೂಜ್ಯರಿಗೆ ೫೦ ತುಂಬಿದಾಗ ಸುವರ್ಣ ಸಂಭ್ರಮವನ್ನು ಆಚರಿಸಲಾಯಿತು . ಆಗ  ಅನೇಕ ಧಾರ್ಮಿಕ  ಕಾರ್ಯಕ್ರಮಗಳು ಅರುಗಿದವು. j
ಬಡವ ಬಲ್ಲಿದ, ಸುಶಿಕ್ಷಿತ ನಿರಕ್ಷರಿ,ಮೇಲು ಕೀಳು ಎಂಬ ತರತಮ ಭಾವವನ್ನೇ ಕಿತ್ಥು ಹಾಕುವಷ್ಟು ಹರಿತವಾಗಿತ್ತು ಅವರ ಅಂತರಂಗದ ಸದ್ಭಾವ ದೃಷ್ಟಿ ! ಭಕ್ತರೆಲ್ಲರನ್ನು ದೈವ ಶ್ರದ್ಧೆಯ ಸಮರಸದದ್ಲ್ಲಿ ತೇಲಾಡಿಸಿಬಿಡುವ ಅದಮ್ಯ ಚೈತನ್ಯವಿತ್ತು ಅವರ ಸಾಮಿಪ್ಯದಲ್ಲಿ! ಅಂತೇಯೇ ಲಕ್ಷ ಲಕ್ಷ ಜನ ಅಂತಿಮ ಯಾತ್ರೆಯಲ್ಲಿ ಮಿಂದು ಪವಿತ್ರರಾದರು. ಚಿಕ್ಕ ಮಕ್ಕಳಂತೆ ಬಿಕ್ಕಿ ಬಿಕ್ಕಿ ಅತ್ತರು ! ಮೈಮರೆತು ಸೇವೆಯನ್ನೂ ಸಲ್ಲಿಸಿದರು !
ಇತಿಹಾಸದಲ್ಲಿ ಎಂದೂ ಕೇಳಿರದ , ಭವಿಷ್ಯದಲ್ಲಿ ಎಂದೂ ಕಾಣದಂತಹ ಸನ್ನಿವೇಶ 20 08 2014 ರಂದು ನಿರ್ಮಾಣವಾಗಿತ್ತು. ಅಂತಹ ದೃಶ್ಹ್ಯವನ್ನು ಕಂಡು ಕಣ್ಣುಗಳು ಪವಿತ್ರವಾದವು! ಕೀರ್ತಿ ಕೇಳಿದ ಕಿವಿಗಳು ಧನ್ಯವಾದವು ! ಮನಸ್ಸು ಭಾವಗಳು ಪುಲಕಿತಗೊಂಡವು !

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ